ಈ ಪುಸ್ತಕದಲ್ಲಿ ಅಮೂಲ್ಯವಾದ ಸಂಸ್ಕೃತ ಸುಭಾಷಿತಗಳ ಅರ್ಥವನ್ನು ವಿವರಿಸುವುದರ ಜೊತೆಗೆ ಅವುಗಳ ಸಂಪೂರ್ಣ ವಿಶ್ಲೇಷಣೆಯನ್ನು ನೀಡಲಾಗಿದೆ. ಈ ವಿಶ್ಲೇಷಣೆಯನ್ನು ಓದಿದರೆ ಆ ಸುಭಾಷಿತದ ಸಂಪೂರ್ಣ ಅರ್ಥದ ಅರಿವಾಗುತ್ತದೆ; ಜ್ಞಾನ ಮತ್ತು ಅನುಭವ ಜ್ಞಾನ ಹೆಚ್ಚಾಗುತ್ತದೆ. ಅಮೂಲ್ಯವಾದ ಅರ್ಥಗರ್ಭಿತ ಸಂಸ್ಕೃತ ಶ್ಲೋಕಗಳಿಗೆ ನೀಡಿರುವ ಅರ್ಥ ಹಾಗೂ ವಿಶ್ಲೇಷಣೆಯಿಂದ ಆ ಸುಭಾಷಿತಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ಅವುಗಳಲ್ಲಿನ ಆಳವಾದ ಜ್ಞಾನವನ್ನು ಅರಿಯಲು ಸುಲಭವಾಗುತ್ತದೆ. ಈ ವಿಶ್ಲೇಷಣೆಗಳನ್ನು ಓದಿದ ನಂತರ ಸಂಸ್ಕೃತ ಸುಭಾಷಿತಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಹೊಸ ದೃಷ್ಟಿಕೋನ ದೊರೆತಂತಾಗುತ್ತದೆ. ಈ ಶ್ಲೋಕಾರ್ಥಗಳನ್ನು ಹಾಗೂ ಅವುಗಳ ವಿಶ್ಲೇಷಣೆಯನ್ನು ಓದುವುದರಿಂದ ಅನುಭವ, ಜ್ಞಾನ ಹಾಗೂ ಆನಂದ ಇವು ಮೂರೂ ಸಮೃದ್ಧಿಯಾಗಿ ದೊರೆಯುತ್ತವೆ.
Author: | |
---|---|
Publisher: | |
Pages: |